MEANING OF “RAAMA” :
೧. ರಾಮ - ರ + ಆ + ಮ – ರಾಮ. ಮೊದಲು ‘ರ’, ಕೊನೆಗೆ ‘ಮ’ ಇದೆ. ಮಧ್ಯದಲ್ಲಿ “ಆ” ಇದೆ.
“ರ” – ರತಿ, ರಮಣ, ಸುಖ ಎಂಬ ಅರ್ಥ. “ಮ” – ತಿಳುವಳಿಕೆ
“ಆ” ಕಾರವನ್ನು ಈಚೆಗೂ, ಆಚೆಗೂ ಅನ್ವಯಿಸಿಕೊಳ್ಳಬೇಕು. ಹೊಸ್ತಿಲಲ್ಲಿ ಇಟ್ಟ ದೀಪ ಹೇಗೆ ಹೊರಗೂ ಒಳಗೂ ಬೆಳಕು ಚೆಲ್ಲುವುದೋ ಹಾಗೆ.ಮಧ್ಯದಲ್ಲಿರುವ ಆಕಾರ ಮೊದಲಿನ ರಕಾರಕ್ಕೂ, ಕೊನೆಯ ಮಕಾರಕ್ಕೂ ಸೇರುವುದು. ಆ ಎಂದರೆ ಒಳ್ಳೆಯ ರ ಎಂದರೆ ಸುಖ ಮತ್ತು ಮ – ತಿಳುವಳಿಕೆ ಉಳ್ಳವನೇ ರಾಮ. - ವಿಶ್ವಪ್ರಿಯತೀರ್ಥರು
೨. ಸಕಲರ ಮನಸ್ಸಿಗೂ ಮುದ ನೀಡುವವನಾದ್ದರಿಂದ – ರಾಮ
೩. ಸದಾ ಮರಕತಮಣಿಯಂತೆ ನೀಲವರ್ಣನಾದವನಾದ್ದರಿಂದ – ರಾಮ
೪. ಸದಾ ರಮೆಯೊಂದಿಗೆ ಕೂಡಿದವನಾದ್ದರಿಂದ – ರಾಮ
೫. ಸ್ತ್ರೀಯರಿಗೆ ಮನೋರಮನಾದ್ದರಿಂದಲೂ – ರಾಮ
- ಸಂಗ್ರಹರಾಮಾಯಣ

