Close
Hare Srinivasa !!, Share the Information you Know on Madhwa Sampradaaya, Share with Others, Write it Now

Hari vittala



ದಾಸನಾಗಬೇಕೊ ಹರಿ ನಿನ್ನ ದಾಸನಾಗಬೇಕೊ
ತಂದೆ ತಾಯಿ ಎಂದು ನಂಬಿ ಬಂದ ಎನ್ನ ( ದಾಸ )
ತ್ರೇತ ಯುಗದಲ್ಲಿ ಬಂದು ಜಗಕ್ಕೆ ಆಸೆ ತಂದು
ತನುವ ಎತ್ತಿ  ಮುರಿದು ಜಾನಕೀ ಕೈ ಪಿಡಿದು
ಹನುಮನಿಗೆ ಪ್ರೀತಿ ತಂದು ರಾವಣನ ಗೆದ್ದು
ಲೋಕಕ್ಕೆ ಪ್ರಖ್ಯಾತನಾದ ರಾಮ ನಿನ್ನ ( ದಾಸ )
ದ್ವಾಪರ ಯುಗದಲ್ಲಿ ಬಂದು ಗೋಪಿಯರೊಡನಾಡಿ
ಬಾಲಕಥನದಲ್ಲಿ ಅಸುರರ ಕೊಂದು ನಾಟ್ಯವಾಡಿದ
ಭೀಮನಿಗೆ ಪ್ರೀತಿ ತಂದು ಕೌರವರನ್ನು ಗೆದ್ದು
ಧರ್ಮಕ್ಕೆ ದಾರಿ ತೋರಿದ ಕೃಷ್ಣ ನಿನ್ನ ( ದಾಸ )
ಹನುಮನ ಹೃದಯದಲಿ ವಾಸ  ಮಾಡುವ ಹರಿಯೇ
ಭೀಮನ ಪ್ರೀತಿಯಲಿ ಇರುವ ಹರಿಯೇ
ಹರಿ ವಿಠ್ಠಲ ಪಾದವ ಸೇರುವುದಕ್ಕೆ
ಬಂಧು ಬಳಗವನ್ನು ಬಿಟ್ಟು ಬರುವೆನು ಹರಿಯೇ ( ದಾಸ )

Written by Sureshrao

{Sureshrao has written 3 posts on Madhwas | Madhvas . See all posts by }


Leave a Reply

Hari vittala